Sunday, August 9, 2009

ಮರಳಿ ಬಂದಿದ್ದೇನೆ

ಬ್ಲಾಗಲ್ಲಿ ಹೆಚ್ಚು ಉದ್ದಕ್ಕೆ ಬರೆಯಬಾರದು,ಯಾರೂ ಓದಲ್ಲ ಎಂದಿದ್ದಳು ಸಾಹಿತ್ಯ.ಹಾಗೇಕೆ ಎಂದೆ ಪೆದ್ದು ಪೆದ್ದಾಗಿ.
ಕತ್ತೆ ನಿನಗೆ ಗೊತ್ತಿಲ್ಲ,ಇದು ಇಂಡಿಯಾ ಅದರಲ್ಲೂ ಕರ್ನಾಟಕ..ಬಹಳ ಹೊತ್ತು ಓದೋದಕ್ಕೆ ಯಾರಿಗೂ ಬಿಡುವು ಇರೋದಿಲ್ಲ..
ಹಾಗಾದರೆ ಭೈರಪ್ಪನವರ ಕಾದಂಬರಿಯನ್ನು ಯಾರು ಓದ್ತಾರೆ ಎಂದು ಕೇಳಿದರೆ,
ತರಲೆ..ಸೀದಾ ಮಾತನಾಡು..ಬ್ಲಾಗ್ ಓದೋರು ಟೈಂಪಾಸ್ ಪ್ರಿಯರು..ಅವರಿಗೆ ಕಡ್ಲೆಕಾಯಿ ತಿಂದಷ್ಟೇ ಅನುಭವ ಬ್ಲಾಗ್ ಬರಹ ಎಂದಳು..
ಎಷ್ಟು ದೊಡ್ಡ ಬರೆದರೆ ಸಾಕು ಎಂದು ಕೇಳಿದೆ.
ಭರ್ತಿ ಮುನ್ನೂರು ಶಬ್ದ..ಅಲ್ಲಿಗೆ ಎಂಡ್ ಮಾಡು ಎಂದಳು.
ಕಮೆಂಟ್ಸ್ ಬೇಕಾ ಎಂದೆ..
ನಾನು ನೀನು ಬರೆಯೋದರಿಂದ ಬೇಕು ಎಂದಳು..ಹಾಗೆಂದರೆ ಎಂದು ಕೇಳಿದರೆ,ಹುಡುಗೀರು ಬ್ಲಾಗ್ ಬರೆದರೆ ಭಲೇ ಕಮೆಂಟ್ಸ್ ಬರುತ್ತೆ..ಎಲ್ಲಾರೂ ಪ್ರತಿಕ್ರಿಯೆ ಮಾಡ್ತಾರೆ ಎಂದಳು..
ಹುಡುಗರು..ಎಂದೆ
ಶಟ್‌ಅಪ್ ಎಂದಳು..
ಮತ್ತೆ ಅಮೆರಿಕಾಕ್ಕೆ ಯಾಕೆ ಹೋದೆ?ಎಂದಳು ಸಾಹಿತ್ಯ..
ನಾನು ಅದನ್ನು ವಿವರಿಸುತ್ತಾ ವಿವರಿಸುತ್ತಾ ಹೋಗುತ್ತಿದ್ದೆ..ಅವಳು ಕಾರು ಓಡಿಸ್ತಾ ಇದ್ದಾಳೆ..
ನ್ಯೂಯಾರ್ಕ್‌ನಿಂದ ಸೀದಾ ಬಂದಿಳಿದದ್ದು ಬೆಂಗಳೂರಲ್ಲಿ..ನಿನ್ನೆಯಷ್ಟೇ..
ನಾಳೆ ಊರಿಗೆ ಹೊರಡೋಣ ಎಂದುಕೊಂಡಿದ್ದೇನೆ..ಯಾರಾದರೂ ಬ್ಲಾಗ್ ಸ್ನೇಹಿತರು ಸಿಗುತ್ತಾರಾ ಅಂತ ನೋಡಬೇಕು..ಬಹುತೇಕ ಯಾರನ್ನೂ ಪರಿಚಯ ಆಗಿಲ್ಲ.ಏಕೆಂದರೆ ನಾನು ಬ್ಲಾಗ್ ಲೋಕಕ್ಕೇ ಹೊಸಬಳು..
ಏನಮ್ಮಾ ಇದು ಮೂರ್ತಿ ಗಲಾಟೆ ಎಂದೆ.
ನಿನ್ನಜ್ಜಿ..ಎಂದು ಅವಳು ಸರ್ವಜ್ಞ,ತಿರುವಳ್ಳರ್ ಬಗ್ಗೆ ಹೇಳಿದಳು.
ಮೂರ್ತಿ ಇಡದಿದ್ದರೆ ಏನಾಗುತ್ತದೆ ಎಂದಳು..
ಇಟ್ಟರೆ ಏನು ಬರುತ್ತೆ ಹೇಳು ಎಂದೆ..
ಏನಿಲ್ಲಾ..ಭಾಷೆ,ಸಂಸ್ಕೃತಿ ಒಂದಾಗುತ್ತದೆ ಎಂದಳು..
ಸುಮ್ಮನೇ..ಇದೆಲ್ಲಾ ರಾಜಕೀಯ ಅಷ್ಟೇ..ಸರ್ವಜ್ಞ ಕಾಲಾತೀತ..ತಿರುವಳ್ಳರ್ ಅವನಂತೆ ಮತ್ತೊಬ್ಬ.ಇವರ ಮೂರ್ತಿ ಇಟ್ಟರೂಂತ ತಮಿಳುನಾಡು ಕರ್ನಾಟಕ ಒಂದಾಗೋದಿಲ್ಲ.ಇಡದಿದ್ರೆ ಏನೂ ಊರು ಕಿತ್ತು ಹೋಗೋದಿಲ್ಲ..
ಅದು ವಾಜಪೇಯಿ ಕರಾಚಿಗೆ ಬಸ್ಸು ಹಾಕಿದ ಹಾಗೇ ಅಷ್ಟೇ ಎಂದೆ.
ನೀನು ಅಮೇರಿಕಾದಲ್ಲಿ ಹುಟ್ಟಿ ಬೆಳೆದೋಳು..ನಿನಗೆ ಇಂಡಿಯಾದ ನಾಡಿ ಗೊತ್ತಿಲ್ಲ..ಎಂದು ಬೈದಳು ಸಾಹಿತ್ಯ॒
ನಾನು ಅವಳ ಮನೆಗೆ ಬಂದವಳೇ ಸ್ನಾನ ಮುಗಿಸಿ ಇಡ್ಲಿ ತಿಂದು ಅವಳ ಬೆಡ್‌ರೂಮಲ್ಲಿ ಹೊದ್ದು ಮಲಗಿದೆ..ಏಸಿ ಛಳಿಗೆ ಮತ್ತೊಂದು ರಗ್ಗು ಮೈಮೇಲೆ ಎಳೆದುಕೊಂಡು..
ಅಮೇರಿಕಾದಿಂದ ಇಪ್ಪತ್ತನಾಲ್ಕು ವರ್ಷದ ಹುಡುಗಿ ಒಬ್ಬಳೇ ವಿಮಾನದಲ್ಲಿ ಬರೋವಾಗ ಏನಾಯಿತು ಎಂದು ಇನ್ನೊಮ್ಮೆ ಹೇಳುತ್ತೇನೆ ಮಜಾ ಇದೆ.

Monday, July 13, 2009

ಹೀಗಲ್ಲ-೬

.."the best smell in the world is that man that you love.."
ಈ ನುಡಿಗಟ್ಟು ಅದೆಷ್ಟೋ ಸಲ ನನ್ನನ್ನು ಹಿಂಬಾಲಿಸಿದೆ.
ಎಂತ ಮಾತು! ಪ್ರೀತಿಸಿದವರಿಗೆಲ್ಲಾ ಈ ಮಾತು ಹಿತವಾಗಿ ಬಂದು ಹಿಡಿದುಕೊಳ್ಳುತ್ತದೆ.ನೀವೊಬ್ಬರು ಹುಡುಗೀನಾ ಪ್ರೀತಿಸಿದಿರಿ ಅಂತ ಆರಂಭಿಸೋಣ.ಪ್ರೀತಿ ಎಂದರೆ ದ್ರವ್ಯ.ದ್ರವ್ಯ ಎಂದರೆ ದ್ರವಿಸೋದು ಎಂದೂ ಅರ್ಥ.ಅಂದರೆ ಪ್ರೀತೀನಾ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ.ಅದು ಹರಿಯುತ್ತಾ ಇರಬೇಕು..ಹಾಗೇ ಹರಿಯೋ ಪ್ರೀತಿ ಒಂದು ಹಂತದಲ್ಲಿ ನಿಂತು ಬಿಡುತ್ತದೆ..
ಏನೆಂದೆ?
ಅರ್ಥವಾಯಿತೇ?
ನೀವು ಪ್ರೇಮಿಯಾಗಿದ್ದರೆ ಮಾತ್ರಾ ಈ ಮಾತು ಅರ್ಥವಾಗುತ್ತದೆ.
ಮೊದಲ ಬಾರಿಗೆ ಆ ಸನಿಹದಲ್ಲಿ ನೀವು ಆಸ್ವಾದಿಸಿದ ನಿಮ್ಮ ಪ್ರಿಯಕರನ ಬಾಡಿ ಸ್ಪ್ರೇ ನಿಮ್ಮನ್ನು ಅದು ಎಷ್ಟು ಕಾಲ ಕಾಡುತ್ತದೆ ಎಂದರೆ ನಿಮಗೆ ಮುಂದೊಮ್ಮೆ ನಿಮ್ಮ ಗೆಳೆಯನ ವಿಯೋಗವಾಗಿ ನೀವು ಇನ್ಯಾರನ್ನೋ ಮದುವೆಯಾಗಿ ಅವನ ತೆಕ್ಕೆಯಲ್ಲಿ ನೀವಿದ್ದಾಗ ಆ ಬಾಡಿ ಸ್ಪ್ರೇ ಅದೇ ಆಗಿದ್ದರೆ..
ಅಲಾಸ್!!!
ಮತ್ತೆ ಮತ್ತೆ ಕಾಡುವ ಆ ಸುವಾಸನೆ..
ಅದರಲ್ಲಿ ಅರಳಿ ನಿಂತ ನಿಮ್ಮ ಹುಡುಗ॒
ಈ ವಿಚಾರ ಹುಡುಗನಿಗೂ ಅನ್ವಯವೇ.ಮುಖ ಒರಸಿಕೊಳ್ಳಲು ಹುಡುಗಿಯ ಕರ್ಚೀಫ್ ತೆಗೆದುಕೊಂಡ ಹುಡುಗನಿಗೆ ಆ ಪುಟ್ಟ ಕರವಸ್ತ್ರದಲ್ಲಿ ಏನೋ ಹುದುಗಿದೆ.ಅದು ಅವನ ಜಗತ್ತು..ಇನ್ನೊಬ್ಬರಿಗೆ ಏಕೆ ಆ ಹುಡುಗಿಗೂ ಅದು ಕೇವಲ ಟವಲ್ಲು..
ಆ ಸೋಪನ್ನೇ ಏಕೆ ಬಳಸುತ್ತೀರಿ ಎಂದು ಕೇಳಿದರೆ ಅದರ ನೊರೆಯಲ್ಲಿ ಅವಳ ಕಂಡೆ ಎನ್ನುವ ಹುಡುಗ ಅಥವಾ ಆ ಸ್ಮೆಲ್ಲಲ್ಲಿ ನನ್ನ ಇನಿಯ ಎಂದ ಹುಡುಗಿ..
ಅಯ್ಯಯ್ಯೋ!॒!!!!!!!!!!

Saturday, July 11, 2009

ಹೀಗಲ್ಲ-೫

ನನಗೆ ಇದಾಗಬಾರದಿತ್ತು ಎಂದು ಈಗಲೂ ಆಗುತ್ತಿದೆ.ಆದರೇನು ಮಾಡೋದು ಆಗಿಯೇ ಹೋಯಿತು.
ಮನಸ್ಸಲ್ಲಿ ಆ ನೋವು ಇನ್ನೂ ಹಸಿಹಸಿ.ಬಹುಶಃ ಬಹಳ ಕಾಲ ಇದು ಕಾಡಬಹುದೇನೋ..
ಇದು ನನಗೆ ಹೊಸದು.ಅಮೇರಿಕೆಯಲ್ಲಿದ್ದಾಗ ಇಂಥದ್ದೆಲ್ಲಾ ನಾನು ಅನುಭವಿಸಿದವಳಲ್ಲ.ಹಾಗೆಂದು ಭಾರತಕ್ಕೆ ಬಂದ ಕಾರಣ ಹೀಗಾಯಿತೆಂದು ದುಃಖಿಸುವುದೂ ಇಲ್ಲ.
ಆದದ್ದು ಇಷ್ಟು.
ನನ್ನ ಪುಟ್ಟ ಕಾರನ್ನು ಓಡಿಸಿಕೊಂಡು ಆ ಹಳ್ಳಿಯಲ್ಲಿ ಹೋಗುತ್ತಿದ್ದೆ. ಸುಮಾರು ಮೂರು ಗಂಟೆ ಕಳೆದಿರಬೇಕು.ಸಣ್ಣ ಮಳೆ ಆಗಷ್ಟೇ ಬಂದು ಹೋಗಿತ್ತು.ನಾನು ಯಾರನ್ನೋ ಭೇಟಿ ಮಾಡುವುದಕ್ಕೆ ಇತ್ತು.ಮಧ್ಯಾಹ್ನ ನನ್ನ ಗೆಳೆಯ ಆದರ್ಶನ ಮದುವೆ ಊಟ ಮಾಡಿದವಳೇ ಸೀದಾ ಹೊರಟಿದ್ದೆ.ಅವನೋ ತಾನು ಮೂರೂಮುಕ್ಕಾಲು ವರ್ಷ ಪ್ರೀತಿಸಿದ್ದ ಹುಡುಗಿಯನ್ನು ಮದುವೆಯಾದ ಖುಷಿಯಲ್ಲಿ ಓಲಾಡುತ್ತಿದ್ದ.ಚೆಂದದ ಹುಡುಗ.ಮನೆ ಮನೆ ಪೇಪರ್, ಹಾಲು ಹಾಕಿ ಕೆಲಕಾಲ ಕೇಟರಿಂಗ್‌ನಲ್ಲಿ ಕೆಲಸದಾಳಾಗಿ ದುಡಿದು ಇಂಜಿನೀರಿಂಗ್ ಓದಿ ಆಮೇಲೆ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.ಶ್ರೀಮಂತ ಕುಟುಂಬದ ಹುಡುಗಿ ಅವನಿಗೆ ಮನಸೋತು ಬಂದಿದ್ದಳು.ಅವಳು ಅವನ ಬಾಲ್ಯ ಸ್ನೇಹಿತೆ.ಅವನ ಎಲ್ಲಾ ಕಷ್ಟ ನಷ್ಟಗಳನ್ನು ಕಾಣುತ್ತಾ ಕಾಣುತ್ತಾ ಅವನನ್ನು ಹೆಚ್ಚುಹೆಚ್ಚಾಗಿ ಪ್ರೀತಿಸುತ್ತಾ ವರಿಸಿಕೊಂಡಳು.
ಆ ಇಬ್ಬರಿಗೂ ಶುಭ ಹೇಳಿ ಹೋಳಿಗೆ ಊಟ ಮುಗಿಸಿ ಹೊರಟಿದ್ದೆ.
ಆ ಇಳಿಜಾರಿನಲ್ಲಿ ಅದೆಲ್ಲಿ ಇತ್ತೋ ಒಂದು ಸರೀಸೃಪ.ಥಟ್‌ಅಂತ ಅಡ್ಡಾದಿಅಡ್ಡ ಬಂದೇ ಬಂತು.ಬ್ರೇಕ್ ಹೊಡೆದೆ.ಕಾರು ನಿಂತಿತು.ಅಡಿಯಲ್ಲಿ ಆ ಸರೀಸೃಪ ಸಿಕ್ಕಿಹಾಕಿಕೊಂಡಿದೆ ಎಂದು ಖಚಿತವಾಗಿತ್ತು.ಹಿಂದಕ್ಕೆ ಕೊಂಚ ಸರಿಸಿದೆ.ನೋಡುತ್ತೇನೆ ಅಚ್ಚ ಹಳದಿ ಬಣ್ಣದ ನಾಗರಹಾವು.
ಅದರ ಬಾಲ ಸೀಳಿ ಹೋಗಿತ್ತು.ಆ ಜೀವ ಒದ್ದಾಡುತ್ತಾ ಒದ್ದಾಡುತ್ತಾ ಬಂದ ದಾರಿಯಲ್ಲೇ ತಿರುತಿರುಗಿ ನರಳಿಕೊಂಡು ಕೆಳಗೆ ಕಾಡಲ್ಲಿಳಿದು ಕಾಣೆಯಾಯಿತು.
ಅರೆ ಕ್ಷಣದಲ್ಲಿ ನನಗೆ ಅಳುವೇ ಬಂದು ಬಿಟ್ಟಿತು.ಜೋರಾಗಿ ಅತ್ತೆ. ಆ ಬಡಪಾಯಿ ನಾಗರನ ಆ ಕ್ಷಣದ ನೋವು ನನ್ನದೇ ಆಗಿತ್ತು.
ನನ್ನ ತಪ್ಪೇನಿರಲಿಲ್ಲ. ಅದರದ್ದೂ ತಪ್ಪಿಲ್ಲ.ಇಬ್ಬರ ಪಾಡಿಗೆ ಇಬ್ಬರಿದ್ದಾಗ ಎಂಥಾ ಅನಾಹುತ ಆಗಿಬಿಟ್ಟತು ಎಂದು ಹಳಹಳಿಸಿದೆ.
ಇದನ್ನು ಸಂಘಟಿಸುವವರು ಯಾರು ಎಂದು ನನ್ನಲ್ಲೇ ಕೇಳಿಕೊಂಡೆ.ಉತ್ತರ ಸಿಗಲಿಲ್ಲ.
ಮನೆಗೆ ಬಂದಾಗ ಅಮ್ಮ ನಾಗದೋಷದ ಬಗ್ಗೆ ಹೇಳಿದಳು.ಸುಬ್ರಹ್ಮಣ್ಯ ದೇವರಿಗೆ ಇದೆಲ್ಲಾ ಅರ್ಥವಾಗುತ್ತದೆ ಎಂದು ಹಾಸಿಗೆಯಲ್ಲಿ ಮುರುಟಿ ಮಲಗಿದೆ.
ರಾತ್ರಿಯಿಡೀ ಆ ಜೀವ ಪಟ್ಟ ಸಂಕಟ ನನ್ನನ್ನು ಹಿಂಡುತ್ತಿತ್ತು..

Friday, July 10, 2009

ಹೀಗಲ್ಲ-೪

ಮೈಕಲ್ ಜಾಕ್ಸನ್‌ನ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಮಾತಾಡ್ತಾರೇನೋ ಅಂತ ಅನ್ನಿಸುತ್ತಿದೆ.
ಮೀಡಿಯಾಗಳ ಕಾಟ ಅತಿಯಾಯಿತು ಅಂತ ಆಗೋದೇ ಇಂಥಾ ಸಂದರ್ಭದಲ್ಲೇ..ಅವನು ಪಾಪ್ ಗಾಯಕ.ಅಷ್ಟೇ ಆಗಿದ್ದರೆ ಸರಿಯೆನಬಹುದಿತ್ತು.ಪಾಪಿ ಕೂಡಾ.
ದೊಡ್ಡವರೆಲ್ಲಾ ಹೀಗೆ ಇರುತ್ತಾರೇನೋ ಗೊತ್ತಿಲ್ಲ.
ಅನೇಕಬಾರಿ ಪಾಪಿಗಳನ್ನು ನಾವು ಆರಾಧಿಸುತ್ತೇವೆ.ತಪ್ಪೇನಲ್ಲ.ಪಾಪಿ ಕೂಡಾ ತನ್ನ ಪಾಪಗಳ ಬಗ್ಗೆ ಪಶ್ಚಾತಾಪಪಟ್ಟಾಗಲೇ ಅವನು ಪಾಪಿಯಾಗುತ್ತಾನೆ.ಪಾಪಿ ಆಗದೇ ಇರೋದು ಹೇಗೆ ಅಂದರೆ ಮಾಡಿದ ಪಾಪಗಳ ಬಗ್ಗೆ ಕೊಂಚವೂ ಯೋಚಿಸದಿರೋದು.
ಕೆಥರ್‌ಸಿಸ್ ಅಂತಾರೆ.ಭಾವಶುದ್ಧೀಕರಣ.ಪಾಪ ಪ್ರಜ್ಞೆಯಿಂದ ದೂರ ಸರಿಯುವ ಪ್ರಕ್ರಿಯೆ ಅದು.ಪ್ರತೀನಿತ್ಯವೂ ಅಂಥದ್ದು ನಮ್ಮೊಳಗೆ ಆಗುತ್ತಲೇ ಇರುತ್ತದೆ.
ತಿಂಗಳ ಹಿಂದೆ ನಾನು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮುಂಬೈಗೆ ಹೋಗುವ ಸಿದ್ಧತೆಯಲ್ಲಿದ್ದೆ.ಅಲ್ಲಿದ್ದ ಉಚಿತ ಫೋನ್‌ನಿಂದ ಅಮ್ಮನಿಗೆ ಮಾತನಾಡಿ ಯಾವುದೋ ಥ್ರಿಲ್ ಪಡೆದುಕೊಂಡು ಕುಳಿತಿದ್ದೆ.ಅಮೇರಿಕೆಯ ವಿಮಾನನಿಲ್ದಾಣಗಳನ್ನು ನೋಡಿ ನೋಡಿ ಸುಸ್ತಾದವಳಿಗೆ ಈ ನಿಲ್ದಾಣ ಯಾವುದೋ ರಿಕ್ಷಾಸ್ಟಾಂಡ್ ಥರ ಕಾಣಿಸುತ್ತಿತ್ತು.
ನನ್ನೆದುರಿಗೆ ಇಬ್ಬರು ಮುದುಕರು ಕುಳಿತಿದ್ದರು.ಅವರಲ್ಲಿ ಓರ್ವ ಮಾಜಿ ಸಚಿವ.ಹಾಗಂತ ಆತ ಪಕ್ಕದವನ ಜೊತೆ ಮಾತನಾಡುತ್ತಿದ್ದಾಗ ನನಗೆ ಅರ್ಥವಾಯಿತು.ಮಾಜಿ ಸಚಿವ ಯಾವ ಘನಂದಾರಿ ವಿಚಾರವನ್ನೂ ಮಾತನಾಡುತ್ತಿರಲಿಲ್ಲ.ಬದಲಾಗಿ ತನಗೆ ಕಳೆದ ರಾತ್ರಿ ನಿದ್ದೆಯೇ ಹತ್ತಲಿಲ್ಲ ಎಂದು ಪಕ್ಕದವನ ಜೊತೆ ಗೋಳಿಡುತ್ತಿದ್ದ.ಸಚಿವನಾಗಿದ್ದಾಗ ಎಷ್ಟೋ ರಾತ್ರಿ ನಿದ್ದೆ ಬರುತ್ತಿರಲಿಲ್ಲ.ಆದರೆ ಅದನ್ನೆಲ್ಲಾ ಕರಗಿಸಿಕೊಳ್ಳೋ ತಾಖತ್ತು ತನಗಿತ್ತು ಎಂದ.ಈಗ ಮಾತ್ರಾ ಒಂದು ರಾತ್ರಿಯನ್ನೂ ನಿದ್ದೆ ಇಲ್ಲದೇ ಕಳೆಯಲು ಸಾಧ್ಯವಾಗುತ್ತಿಲ್ಲ..ಭಯವಾಗುತ್ತದೆ.ಏನಿಲ್ಲಾ ಎಂದು ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಂತೆ ಏನೋ ಇದೆ ಎಂಬ ಭಯ ಬಂದು ಅಮುಕುತ್ತದೆ ಎಂದು ಹೇಳುತ್ತಿದ್ದ.
ನಾನು ಆ ಮಾಜಿ ಸಚಿವನ ಮುಖವನ್ನೇ ನೋಡಿದೆ.ಅವನಲ್ಲಿ ವಿಷಣ್ಣಛಾಯೆ ಇತ್ತು.ಆರ್ತನಾದ ಎದ್ದು ಕಾಣುತ್ತಿತ್ತು.
ಪಾಪಿ ಚಿರಾಯು ಅಂತ ಹೇಳಿಕೊಂಡೆ.
ಅವನಿಗೆ ನಿದ್ದೆ ಇಲ್ಲದ ಆ ರಾತ್ರಿಯಲ್ಲಿ ನಾನು ನನ್ನ ದಿಂಬನ್ನು ತೊಡೆಸಂದಿಗೆ ಸಿಕ್ಕಿಸಿಕೊಂಡು ಕವುಚಿ ಮಲಗಿ ಸುಖನಿದ್ದೆಯಲ್ಲಿ ಮುಳಗೆದ್ದುದನ್ನು ನೆನೆಸಿ ಸಖತ್ ರೋಮಾಂಚನಗೊಂಡೆ.

Thursday, July 9, 2009

ಹೀಗಲ್ಲ-೩

ಸಾಮಾನ್ಯವಾಗಿ ನಾನು ಸ್ವದೇಶಕ್ಕೆ ಮರಳಿದ ಮೇಲೆ ಕಾರು ಯೂಸ್ ಮಾಡೋದು ಕಡಿಮೆ.
ಅಷ್ಟು ವರ್ಷ ಅಮೇರಿಕಾದಲ್ಲಿ ಇದ್ದೆನಲ್ಲ,ಅಲ್ಲಿ ಕಾರು-ಬಾರು ಅತಿಯಾಗಿ ಹೋಗಿತ್ತು.ಕಾರು ಅಲ್ಲಿ ಅನಿವಾರ್ಯ,ಇಲ್ಲಿ ಅಗತ್ಯ ಏನಲ್ಲ ಅಂತ ನನಗೆ ಗೊತ್ತಾಗಿತ್ತು.
ಅಮೇರಿಕಾದಲ್ಲಿ ನಾನು ಕಾರು ಡ್ರೈವ್ ಮಾಡೋ ಕ್ರೇಜಿ ಎಷ್ಟಿತ್ತೆಂದರೆ ಒಮ್ಮೆ ಟೆಕ್ಸಾಸ್‌ಗೆ ಏಳುನೂರು ಮೈಲಿ ಒಬ್ಬಳೇ ಡ್ರೈವ್ ಮಾಡ್ತಾ ಹೋಗಿದ್ದೆ.ಪರಮಾನಂದ ಅಂದರೆ ಅದು..
ಈ ನೆಲದಲ್ಲಿ ಕಾರಲ್ಲಿ ಕೂತು ಹೋದರೆ ಏನನ್ನೋ ಕಳೆದುಕೊಂಡಂತೆ..
ಬಸ್ಸಿನಲ್ಲಿ ಹೋಗೋದೇ ಒಂದು ಖುಷಿ..ಜನ ಅವರ ಮಾತು ಕಂಡಕ್ಟರ್ ಜೊತೆ ಜಗಳ,ನೂಕು ನುಗ್ಗಲು,ನನ್ನಂಥ ಜೀನ್ಸ್ ಹಾಕಿದ ಹುಡುಗೀನ ಕಂಡರೆ ಹತ್ತಿರ ಬರಲು ಇನ್ನಿಲ್ಲದ ಪಾಡು ಪಡೋ ಪಡ್ಡೆಗಳು ಅದರಲ್ಲೂ ಮಾತನಾಡಿಸಲು ಮುಂದಾಗೋ ಫಾರ್ಟಿಪ್ಲಸ್‌ಗಳು..
ಬಸ್ಸು ಎಂಬ ಮೊದಲ ವಾಹನಕ್ಕೆ ನಮೋನಮಃ
ಹೀಗೆ ನಾನು ನಿನ್ನೆ ಬಸ್ಸಲ್ಲಿ ಹೋದದ್ದು ನನ್ನ ಅಜ್ಜಿಮನೆಗೆ.ಅಜ್ಜಿ ಸಖತ್ ಹಾಟ್ ಮಗಾ ಆಗಿದ್ದಾರೆ ಅಂತ ನನ್ನ ಸೋದರಮಾವ ಜ್ವರವನ್ನು ಕಿಂಡಲ್ ಮಾಡಿದ್ದ. ಎಂಭತ್ತು ಕಿಲೋಮೀಟರ್ ಪಯಣ.ಜೊತೆಗೆ ಯಾರಾದರೂ ಇದ್ದರೆ ಮಾತಿಗೆ ಹಚ್ಚಬಹುದಿತ್ತೋ ಏನೋ ಅಂತಾಸೆ.
ಅಷ್ಟರಲ್ಲೇ ಪಕ್ಕಕ್ಕೆ ಕುಳಿತವಳು ನನ್ನದೇ ಹರೆಯದ ಹುಡುಗಿ.ಸಲ್ವಾರ್‌ಕಮೀಜ್ ಸೆಟ್ ಮಾಡ್ಕೊಳ್ಳೋದಕ್ಕೆ ಪಾಡುಪಡ್ತಾ ಇದ್ದಳು.
ನಾನೇ ಮಾತಿಗೆಳೆದೆ.
ಟೀಚ್ ಮಾಡ್ತಾ ಇದ್ದಾಳಂತೆ.ಅಚ್ಚ ಕನ್ನಡದಲ್ಲೇ ಶುರು ಮಾಡಿದಳು.ಏನ್ ಸಬ್ಜೆಕ್ಟು ಎಂದರೆ ಕೆಮೆಸ್ಟ್ರೀ ಎಂದಳು.
ಮಾತಾಡ್ತಾ ಮಾತಾಡ್ತಾ ಯಾವಾಗ ನಾನು ಅಮೇರಿಕಾದಿಂದ ಬಂದೆ ಅಂತ ಗೊತ್ತಾಯಿತೋ..ಶುರು ಮಾಡಿದಳು ಇಂಗ್ಲೀಷ್ ಭಾಷಣ.ಕನ್ನಡ ಬೆರೆಸಿ ಬೆರೆಸಿ ಅವಳು ಇಂಗ್ಲೀಷ್ ಮಾತಾಡ್ತಾ ಇದ್ದಾಗ ನನಗೆ ಈ ಹುಡುಗಿಗೂ ಅಮೇರಿಕಾದ ಆಸೆ ಅಂತ ಗೊತ್ತೇ ಆಗಿಬಿಡ್ತು..
ಕೇಳಿಯೇ ಬಿಟ್ಟೆ.
ಹೂಂ ಅಂದಳು..
ಅವಳು ಅಷ್ಟು ಸಣ್ಣ ಪ್ರಯಾಣದಲ್ಲಿ ಅಮೇರಿಕಾದ ಬಗ್ಗೆ ನನ್ನಿಂದ ಬಗೆಬಗೆಯ ಭ್ರಮೆಗಳನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರೋದು ನನಗೆ ಅರ್ಥವಾಗುತ್ತಿತ್ತು.
ಆ ಹುಡುಗೀಗೆ ಅಮೇರಿಕಾದಲ್ಲಿ ವಾಸಿಸೋ ಅವಕಾಶವನ್ನು ಆ ದೇವರು ಮಾಡಲಿ..ಇಂಡಿಯಾದ ಟೀನ್ ಪ್ಲಸ್‌ಗಳೆಲ್ಲಾ ಈ ರೀತಿ ಆಸೆ ಪಡೋದು ತಪ್ಪೇನಲ್ಲ ಅಂತ ನನಗೆ ಗೊತ್ತಿದೆ.ಮೈನಸ್ ಫಾರ್ಟಿ ವಾತಾವರಣದಲ್ಲಿ ಆಕೆ ಬಾಳಿ ಬದುಕಲಿ..
ಏನ್ ಆಸೇನೋ..ಕದವಿಕ್ಕಿ ಬೆತ್ತಲು ಬೋರಲಾಗಿ ಕಣ್ಣ್‌ಮುಚ್ಚಿ ಕತ್ತಲಲ್ಲಿ ಕನಸು ಕಾಣಲೂ ಆಗದ ನೆಲದ್ದು..

Wednesday, July 8, 2009

ಹೀಗಲ್ಲ-೨

ಅನೇಕಬಾರಿ ಈ ಹುಡುಗರು ಪ್ರೀತಿಸೋದಕ್ಕೆ ಪಾಡು ಪಡೋದು ನೋಡಿ ನನಗೆ ಯಾಕೋ ಒಂಥರಾ ಅನಸುತ್ತೆ.
ನಾನು ಬಾಲ್ಯದಿಂದ ಯೌವನಕ್ಕೆ ರೂಪಾಂತರಗೊಂಡದ್ದು ಅಮೇರಿಕಾದಲ್ಲಿ.ಪಾಶ್ಚಿಮಾತ್ಯ ಅದರಲ್ಲೂ ಅಮೇರಿಕನ್ ಜೀವನ ನೋಡಿ ನನಗೆ ಭಾರತದಲ್ಲಿ ಹುಡುಗರ ಕಷ್ಟ ಹೆಚ್ಚು ಅರ್ಥವಾಗಿದೆ ಅಂತಲ್ಲ,ಅಮೇರಿಕೆಯ ಪ್ರೀತಿ ಪ್ರೇಮ ನನಗೆ ಕೊತ್ತಂಬರಿಸೊಪ್ಪಿನ ಘಾಟು ಬರಿಸುತ್ತದೆ.
ಅಲ್ಲಿನ ಪ್ರೀತಿ ಇಲ್ಲಿನ ಪ್ರೀತಿ ತುಂಬಾ ಡಿಫರೆಂಟ್ ಕಣ್ರೀ
ಅದನ್ನು ಯಾವತ್ತಾದರೂ ವಿವರಿಸುತ್ತೇನೆ.
ಈಗ ನಾನು ಹೇಳೋದು ನಮ್ಮ ಇಂಡಿಯನ್ ಹುಡುಗರ ಕಷ್ಟ.ಹುಡುಗೀರನ್ನ ಪ್ರೀತಿಸೋದಕ್ಕೆ ನಮ್ಮ ಹುಡುಗರಿಗೆ ಸಿನಿಮಾ ನೋಡಿಯೇ ಕಲಿಯಬೇಕು.ಸಿಲ್ಲೀ ಅಲ್ವಾ..
ಹುಡುಗಿಯರು ಕಾಯುತ್ತಾ ಇರ್ತಾರೆ..ಯಾರು ಪ್ರೀತಿಸ್ತಾರೆ ಅಂತ..ಎಲ್ಲಾ ಹುಡುಗಿಯರಿಗೂ ಆ ಹಪಹಪಿ ಇದ್ದೇ ಇದೆ.
ಎಷ್ಟಾದರೂ ಹೆಣ್ಣು..ಒಂದು ಸೆಕ್ಯೂರ್ ಅನ್ನೋ ಜಾಗಕ್ಕೆ ಅವಳ ಹುಡುಕಾಟ ಇರುತ್ತದೆ.
ಅದಕ್ಕಾಗಿ ಅವಳು ಹಮ್ಮುಬಿಮ್ಮು ಎಲ್ಲಾ ಮಾಡುತ್ತಾ ಇರುತ್ತಾಳೆ..ಹುಡುಗರಿಗೆ ಅದೆಲ್ಲಾ ಅರ್ಥವೇ ಆಗೋಲ್ಲಾ..ಸುಮ್ಮಸುಮ್ಮನೇ ಎಡವಿಬೀಳ್ತಾರೆ..ಅವರ ಕಷ್ಟ ಪಾಪ..
ಹುಡುಗನ ತೆಕ್ಕೆಯಷ್ಟು ಸೆಕ್ಯೂರ್ ಹುಡುಗಿಗೆ ಬೇರೆ ಇಲ್ಲ.ಆದರೆ ಯಾವ ಹುಡುಗನ ತೆಕ್ಕೆ ಅಂತ ಮಾತ್ರಾ ಇರೋದು..
ಅದಕ್ಕಾಗಿ ಅವಳು ರಾತ್ರಿ ಹಗಲೂ ನಿದ್ದೆಗೆಡ್ತಾಳೆ..ಕನಸುಗಳನ್ನು ದಿಂಬಿನ ಅಪ್ಪುಗೆಯಲ್ಲಿ ಸುತ್ತಿಡುತ್ತಾಳೆ..ಪಾಪ..ನಮ್ ಥರಾ ಹುಡುಗೀರನ್ನು ಈ ಹುಡುಗು ಮುಂಡೇವು ಅರ್ಥವೇ ಮಾಡಿಕೊಳ್ಳಲಾರದೇ ಕಷ್ಟಪಡ್ತಾರೆ..

Tuesday, July 7, 2009

ಹೀಗಲ್ಲ..1

ಡಿಫೆರೆಂಟಾಗಿ ಯೋಚಿಸಬೇಕು..ಗೇ ಸೆಕ್ಸ್‌ಗೆ ಲೈಸೆನ್ಸ್ ಸಿಕ್ಕರೆ ನಮಗೇಕೆ ಕೋಪ ಅಥವಾ ಅಸಹ್ಯ..
ಸೆಕ್ಸ್ ಅಂದರೆ ಅದು ತೀರಾ ಪರ್‌ಸನಲ್..ಅದು ಅವರವರ ಇಷ್ಟ..ಅಥವಾ ಅನಿಷ್ಟ..
ಕಾಮ ಬೇರೆ ಪ್ರೀತಿ ಬೇರೆ..
ಅದನ್ನು ಅರ್ಥ ಮಾಡ್ಕೋಬೇಕಾದರೆ ಸುಮ್ಮನೇ ಫ್ಲೆಕ್ಸ್ ಬಾಗಿಲಲ್ಲಿ ನಿಂತು ನೋಡಬೇಕು..ಟಿಕೇಟಿಗೆ ಸಾವಿರ ರೂಪಾಯಿ ,ಕೋಕ್‌ಗೆ ಮುನ್ನೂರು..ಸ್ನಾಕ್‌ಗೆ ಅರ್ಧ ಸಾವಿರ ..ಕೊನೆಗೆ ಹೊರಗೆ ಬಂದಾಗ ಎರಡೂವರೆ ಸಾವಿರಕ್ಕೆ ಕಮ್ಮಿಯಿಲ್ಲ ಅಷ್ಟೂ ಖಾಲಿ..
ನೋಡಿದ್ದು ಅದೇ ಸಿನಿಮಾ,,
ಸಿನಿಮಾ ನೋಡುತ್ತಾರಾ..ಶಟ್‌ಅಪ್..
ಅದೊಂದು ಸಿಂಪಲ್ ನೆಪ ಅಷ್ಟೇ..
ಅವನ ಕೈ ಅವಳ ಮೇಲೆಲ್ಲಾ ಹರದಾಡಿ..ಅವಳ ಮೈ ಬಿಸಿಯಾಗಿ..ಅವನು ಕಾದ ಕಬ್ಬಿಣ ಅವಳು ಕರಗಿ ಕುಲುಮೆ..
ಇದನ್ನು ಪ್ರೀತಿ ಅಂತಿರೋಕಾ॒ಮ ಅಂತೀರೋ..
ಗೊತ್ತಿಲ್ಲ..
ಇದೂ ಪ್ರೀತಿ ಥರಾ ಇರೋ ಕಾಮ ಅಥವಾ ಕಾಮದ ಪ್ರೀತಿ..
ಕಾಫಿಡೇನಲ್ಲಿ ಅಮೇರಿಕಾದಿಂದ ವಾಪಾಸ್ಸು ಬಂದ ಬ್ಯಾಚುಲರ್ ಬಾಯ್ ಜೊತೆ ಕುಳಿತ ಮೊನ್ನೆ ಮೊನ್ನೆ ಮದುವೆ ಆದ ಹುಡುಗಿಗೆ ಗಂಡನ ನೆನಪಾದರೆ ಅದು ಪ್ರೀತಿನೂ ಅಲ್ಲಾ ಕಾಮನೂ ಅಲ್ಲಾ..
ಅದನ್ನು ಹುಡುಕಾಟ ಅನ್ನುತ್ತಾರಾ..
ಅದೂ ಗೊತ್ತಿಲ್ಲ..
ಸಲಿಂಗ ಕಾಮ ಅಂದರೆ ಏನು? ಅದನ್ನು ಕಾನೂನು ಮಾಡಿದರೆ ಎಲ್ಲಾ ಹುಡುಗೀರೂ ಹುಡುಗರನ್ನ ಬಿಟ್ಟು ಹೋಗುತ್ತಾರಾ..ಅಥವಾ ಹುಡುಗರು ಹುಡುಗೀರನ್ನು ದೂರ ತಳ್ತಾರಾ..
ಇಂಪಾಸಿಬಲ್..
ಸಾಧ್ಯವೇ ಇಲ್ಲ..ಹುಡುಗಿಯ ಆಕರ್ಷಣೆ ಹುಡುಗ ಸಹಜ..ಹಾಗೇ ಹುಡುಗನ ಆಸೆ ಹುಡುಗಿ ಸಹಜ..
ಹಾಗಾದರೆ ಈ ಗೇ ಸೆಕ್ಸ್..ಅದು ಆ ಥರದವರಿಗಿರಲಿ..ಕೋರ್ಟ್ ಯೆಸ್ ಅಂದರೆ ಎಲ್ಲರೂ ಗೇ ಆಗ್ತಾರಾ..
ಈ ಪಾಟಿ ಎದುರಾ ಬದುರಾ ಆಸೆಗಳು ಕುದಿಯುತ್ತಿರುವಾಗ..